ದ್ರಷ್ಟಿ ಧಾಮೀ ಯವರು ಒಬ್ಬ ಭಾರತೀಯ ನಟಿ, ರೂಪದರ್ಶಿ ಮತ್ತು ನರ್ತಕಿ.ಅವರು ಮೊದಲಿಗೆ 'ದಿಲ್ ಮಿಲ್ ಗಯೇ' ಎಂಬ ಧಾರವಾಹಿಯಲ್ಲಿ ಮುಸ್ಕಾನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.ನಂತರ ಅವರು ಗೀತ್-ಹುಯಿ ಸಬ್ಸೇ ಪರಾಯಿಧಾರವಾಹಿಯಲ್ಲಿ ಗೀತ್ ಎಂಬ ಪ್ರಮುಖ ಪಾತ್ರವನ್ನು ಪಡೆದುಕೊಂಡರು.ಅದಲ್ಲದೇ, ಅವರು ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್, ಏಕ್ ಥಾ ರಾಜ ಏಕ್ ಥಿ ರಾಣಿ, ಪರ್ದೇಸ್ ಮೇ ಹೇ ಮೇರಾ ದಿಲ್ ಮತ್ತು ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾದರುಸತಿ ದಹಅಮಿ ಇನ ಪಅರದೆಸ ಮೆಇನ ಹಅಇನ ಮೆರಅ ದಿಲ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು.ಧಾಮೀ ಯವರು ಭಾರತೀಯ ಟೆಲಿವಿಷನ್ ನ ಅಗ್ರ ನಟಿಯರಲ್ಲಿ ಒಬ್ಬರಾಗಿದ್ದಾರೆ. == ಆರಂಭಿಕ ಜೀವನ == ದ್ರಷ್ಟಿ ಧಾಮೀ ಯವರು ೧೯೮೫ ರ ಜನವರಿ ೧೦ ರಂದು ಮುಂಬೈನ ಗುಜರಾತಿ ಕುಟುಂಬದಲ್ಲಿ ಜನಿಸಿದರು. ಮೇರಿ ಇಮ್ಮಾಕ್ಯುಲೇಟ್ ಗರ್ಲ್ಸ್ ಹೈಸ್ಕೂಲ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ ನಂತರ ಮುಂಬೈನ ಮಿಥಿಬಾಯ್ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಪಡೆದುಕೊಂಡರು. ಮಾಡೆಲಿಂಗ್ ಗೆ ಪ್ರವೇಶಿಸುವ ಮೊದಲು ಧಾಮೀ ಯವರು ನೃತ್ಯ ಬೋಧಕರಾಗಿದ್ದರು. == ವೃತ್ತಿ ಜೀವನ == ದ್ರಷ್ಟಿ ಧಾಮೀ ಯವರು ಮನರಂಜನಾ ಉದ್ಯಮದಲ್ಲಿ ಪ್ರಥಮ ಬಾರಿಗೆ ಮುದ್ರಣ ಮತ್ತು ದೂರದರ್ಶನ ಜಾಹೀರಾತುಗಳೊಂದಿಗೆ ಮಾಡೆಲಿಂಗ್ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು 'ಸೈಯಾಂ ದಿಲ್ ಮೇಂ ಆನಾ ರೇ', 'ಹಮ್ಕೋ ಆಜ್ ಕಲ್ ಹೇ', 'ತೇರಿ ಮೇರಿ ನಝರ್ ಕೀ ಡೋರಿ', 'ನಚ್ಲೇ ಸೋನಿಯೋ ತೂ' ಸಂಗೀತ ವೀಡಿಯೋಗಳಲ್ಲಿ ಕಾಣಿಸಿಕೊಂಡರು. ಅದಲ್ಲದೇ ಅವರು ಕೊಲ್ಗೇಟ್,ಲಯನ್ ಹನಿ, ಆರ್.ಕೆ.ಎಸ್ ಗ್ರ್ಯಾಂಡ್(ಶಾಪಿಂಗ್ ಮಾಲ್), ಅಮೂಲ್, ವಿಐಪಿ ಬ್ಯಾಗ್ಸ್, ರಿಲಾಯನ್ಸ್ ಮೊಬೈಲ್, ಜ್ಯುವೆಲ್ಲರಿ ನಂತಹ ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. == ವೈಯಕ್ತಿಕ ಜೀವನ == ೨೧ ಫೆಬ್ರವರಿ ೨೦೧೫ ರಂದು, ಧಾಮಿ ಸಾಂಪ್ರದಾಯಿಕ ಹಿಂದೂ ಸಮಾರಂಭದಲ್ಲಿ ಉದ್ಯಮಿ ನೀರಜ್ ಖೇಮ್ಕಾ ಅವರನ್ನು ವಿವಾಹವಾದರು. == ಮಾಧ್ಯಮ == ಮಾಧ್ಯಮಗಳು ದ್ರಷ್ಟಿ ಧಾಮೀ ಯವರಿಗೆ 'ಕ್ವೀನ್ ಆಫ್ ಎಕ್ಸ್ಪ್ರೆಶನ್' ಎಂಬ ಬಿರುದನ್ನು ನೀಡುವ ಮೂಲಕ ಅವರ ನಟನಾ ಕೌಶಲ್ಯವನ್ನು ಶ್ಲಾಘಿಸಿವೆ. ದ್ರಷ್ಟಿ ಯವರು ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಗಳಿಸಿರುವ ಕಿರುತೆರೆ ನಟಿಯರಲ್ಲಿ ಒಬ್ಬರಾಗಿದ್ದಾರೆ. == ದೂರದರ್ಶನ == === ವಿಶೇಷ ಪ್ರದರ್ಶನಗಳು === == ಇತರ ಕೆಲಸಗಳು == ದ್ರಷ್ಟಿ ಯವರು ಕನ್ವಿರಾನ್ಮೆಂಟ್ ವೀಕ್ ೨೦೧೧ ಮತ್ತು ೨೦೧೩ ರ ಬ್ರಾಂಡ್ ಅಂಬಾಸಿಡರ್ ಆಗಿದ್ದರು.೨೦೧೬ ರಲ್ಲಿ ಅವರು ಸ್ವಚ್ಛ್ ಸರ್ವೇಕ್ಷಣ್ ೨೦೧೭ ರ ಭಾಗಿಯಾಗಿದ್ದರು.ಧಾಮೀಯವರು ಟೀಮ್ 'ಡಿ' ಸೆಲೆಬ್ರಿಟಿ ಚಾಂಪಿಯನ್ ಶಿಪ್ ೨೦೧೬ ರ ನಾಯಕಿಯಾಗಿದ್ದರು.ಅವರು 'ಐ ಹೆಲ್ಪ್ ಎ ಕಿಡ್.ಕಾಮ್' ಸೆಲೆಬ್ರಿಟಿ ಚಾಂಪಿಯನ್ ಶಿಪ್ ನಿಂದ ಪ್ರಶಸ್ತಿಯನ್ನೂ ಪಡೆದಿದ್ದರು.೨೦೧೭ ರಲ್ಲಿ ಅವರು 'ಬಜಾಜ್ ಬ್ರಾಹ್ಮೀ ಆಮ್ಲಾ ಆಯುರ್ವೇದಿಕ್ ಹೇರ್ ಆಯ್ಲ್' ನ ಬ್ರಾಂಡ್ ಅಂಬಾಸಿಡರ್ ಆದರು. === ಚಲನಚಿತ್ರಗಳು ಮತ್ತು ಜಾಹೀರಾತುಗಳು === === ಇತರ ಪ್ರದರ್ಶನಗಳು === ೨೦೧೦ ರಲ್ಲಿ ಇಮ್ಯಾಜಿನ್ ಟಿವಿಯ ರಿಯಾಲಿಟಿ ಶೋ ಬಿಗ್ ಮನಿ: ಚೋಟಾ ಪಾರ್ದಾ ಬಡಾ ಗೇಮ್‌ನಲ್ಲಿ ಧಾಮಿ ಕಾಣಿಸಿಕೊಂಡರು. ಅದೇ ವರ್ಷದಲ್ಲಿ ಅವರು ಮತ್ತೊಂದು ರಿಯಾಲಿಟಿ ಶೋ, ನ್ಯಾಚ್ಲ್ ವೆ ವಿತ್ ಸರೋಜ್ ಖಾನ್ ನ ಭಾಗವಾಗಿದ್ದರು . ೨೦೧೧ ರಲ್ಲಿ, ಧಾಮಿ (ಅವರ ಗೀತ್ ಸಹನಟ ಗುರ್ಮೀತ್ ಚೌಧರಿ ಅವರೊಂದಿಗೆ) ವಿಶೇಷ ಹೋಳಿ ಸಂಚಿಕೆಗಾಗಿ ರುಬಿನಾ ದಿಲೈಕ್ ಮತ್ತು ಅವಿನಾಶ್ ಸಚ್‌ದೇವ್ ಅವರ ಚೋಟಿ ಬಹು - ಸಾವರ್ ಕೆ ರಂಗ್ ರಾಚಿ ಅವರ ಅತಿಥಿ ನೃತ್ಯ ಪ್ರದರ್ಶನ ನೀಡಿದರು. ನಂತರ ಜುಲೈ ೨೦೧೧ ರಲ್ಲಿ, ಅವರು ಸಾಜನ್ ರೇ ಜೂಟ್ ಮತ್ ಬೋಲ್ ನಲ್ಲಿ ನೃತ್ಯ ಪ್ರದರ್ಶನ ನೀಡಿದರು ಮತ್ತು ನಂತರ ಡಿಸೆಂಬರ್ ೨೦೧೧ ರಲ್ಲಿ, ಧಾಮಿ ಪ್ಯಾರ್ ಕಿ ಯೆ ಏಕ್ ಕಹಾನಿಯಲ್ಲಿ ಕಾಣಿಸಿಕೊಂಡರು ಮತ್ತು ಅಭಯ್ ಮತ್ತು ಪಿಯಾ ಅವರ ವಿವಾಹವನ್ನು ಪ್ರಸಾರ ಮಾಡಿದ ಕೊನೆಯ ಕಂತಿನಲ್ಲಿ ಗುರ್ಮೀತ್ ಚೌದರಿ ಅವರೊಂದಿಗೆ ನೃತ್ಯ ಮಾಡಿದರು. ಜುಲೈ ೨೦೧೨ ರಲ್ಲಿ, ಧಾಮಿ ತನ್ನ ಧಾರವಾಹಿ ಮಧುಬಾಲಾದ ಪ್ರಚಾರಕ್ಕಾಗಿ ಕಲರ್ಸ್ ಟಿವಿಯ ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==